あらすじ
ದೀಪಾವಳೀ ಎಂಬುದು ಹಬ್ಬದ ಪ್ರಸಿದ್ಧವಾದ ಹೆಸರು. ಅವಳಿ ಎಂದರೆ ಸಾಲು (“ವೀಧ್ಯಾಳಿರಾವಳಿಃ ಪಂಕ್ತಿ) ದೀಪಾವಳೀ ಎಂದರೆ ದೀಪಗಳ ಸಾಲು. ಅಂತಹ ದೀಪಗಳ ಪರಂಪರೆಯನ್ನು ಹೊಂದಿರುವುದರಿಂದ ಹಬ್ಬಕ್ಕೆ ಈ ನಾಮಧೇಯ. ಕಾರ್ತಿಕ ಮಾಸದ ಕಡೆಯಲ್ಲಿ ಬರುವ ಶಿವದೀಪೋತ್ಸವ ವಿಷ್ಣು ದೀಪೋತ್ಸವ (ಕೃತ್ತಿಕಾ ದೀಪೋತ್ಸವ) ಎಂಬ ಹಬ್ಬಗಳಲ್ಲಿಯೂ ಮನೆ-ಮಠಗಳ ಒಳಗೂ ಹೊರಗೂ ನಾನಾ ಸ್ಥಾನಗಳಲ್ಲಿ ದೀಪಮಾಲೆಗಳನ್ನು ಬೆಳಗಿಸುತ್ತಾರೆ. ಹೀಗಿರುವಾಗ ನಾವು ತೆಗೆದುಕೊಂಡಿರುವ ಈ ಹಬ್ಬಕ್ಕೇ ಏಕೆ ದೀಪಾವಳೀ ಎಂಬ ವಿಶೇಷ ನಾಮಧೇಯ? ಎಂದರೆ ಇದು ಬಹುಮುಖವಾಗಿ ಮತ್ತು ಬಹುದಿನಗಳ ಕಾಲ ದೀಪಮಾಲೆಗಳನ್ನು ಹೊಂದಿರುವ ಹಬ್ಬ, ಕಾರ್ತಿಕದೀಪೋತ್ಸವದಲ್ಲಿ ವಿಶೇಷವಾಗಿರುವ ದೀಪಬೆಳಗಿಸುವ ಸಮಾರಂಭಕ್ಕೂ ಈ ದೀಪಾವಳಿಯ ದೀಪಹಚ್ಚುವ ಸಮಾರಂಭವೇ ನಾಂದಿಯಾಗಿರುತ್ತದೆ. Our other books here can be searched using #BharathaSamskruthiPrakashana
ISBN: 9789389028478ASIN: 9389028477