あらすじ
ಪ್ರತಿಸಂವತ್ಸರದಲ್ಲಿ ಮತ್ತು ಚೈತ್ರಮಾಸದಲ್ಲಿ ಓಂ ಪ್ರಥಮವಾಗಿ ಬರುವ ಹಬ್ಬ ಯುಗಾದಿ. ಶಾಸ್ತ್ರಗಳಲ್ಲಿ ಮುಖ್ಯವೆಂದು ಪರಿಗಣಿಸಲ್ಪಟ್ಟಿರುವ ಮತ್ತು ಭಾರತ ದೇಶದ ಎಲ್ಲ ಭಾಗಗಳಲ್ಲಿಯೂ ಆಚರಿಸಲ್ಪಡುತ್ತಿರುವ ಮಹಾಪರ್ವ ಇದು. “ವರ್ಷ, ಋತು, ಮಾಸ, ಪಕ್ಷ ಎಲ್ಲಕ್ಕೂ ಪ್ರಾರಂಭಮಂಗಲವಾಗಿ ಇಡಿಯ ಸಂವತ್ಸರಕ್ಕೆ ಪೀಠಿಕೆಯ ರೂಪದಲ್ಲಿರುವ ಪರ್ವ ಇದು. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನ. ಹಿಂದಿನ ವರ್ಷದ ಸಾಧನೆಯನ್ನು ಪರಿಶೀಲಿಸಿ, ಈ ವರ್ಷಕ್ಕೆ ಬೇಕಾದ ಸಂವಿಧಾನವನ್ನು ವಿವೇಕಪೂರ್ವಕವಾಗಿ ಹಾಕಿಕೊಳ್ಳುವ ದಿನ. ಇಂದು ಮಾಡುವ ಸಂಕಲ್ಪವು ಅತ್ಯಂತ ಪ್ರಭಾವಪೂರ್ಣವಾಗುತ್ತದೆ ಎಂಬ ನಂಬಿಕೆಯಿದೆ. ಮನೋಬಲವು ತುಂಬಾ ಇರುವವರು ಯಾವುದೇ ದಿನದಲ್ಲಿ ಸಂಕಲ್ಪಮಾಡಿದರೂ ಅದು ಸುದೃಢ ಮತ್ತು ಪರಿಣಾಮಕಾರಿ ಆಗಬಹುದು. Our other books here can be searched using #BharathaSamskruthiPrakashana
ISBN: 9789389028645ASIN: 9389028647