ಭಾರತದಲ್ಲಿ ದೇಶಾದ್ಯಂತ ಆಚರಿಸಲ್ಪಡುತ್ತಿರುವ ಪ್ರಮುಖ ಹಬ್ಬಗಳಲ್ಲಿ ಸೇರಿದೆ ಗಣೇಶಚತುರ್ಥೀ. ಗೌರೀಹಬ್ಬಕ್ಕೆ ಸೇರಿದಂತೆ ಅದರ ಮಾರನೇ ದಿನವೇ ಅಥವಾ ಕೆಲವುಬಾರಿ ಗೌರೀಹಬ್ಬದ ದಿನವೇ ಬರುವ ಹಬ್ಬ ಇದು. ಗೌರೀಹಬ್ಬವನ್ನು ಆಚರಿಸದೇ ಇರುವವರೂ ಬಹುಮಂದಿ ಈ ಹಬ್ಬವನ್ನು ಬಿಡದೆ ಆಚರಿಸುತ್ತಾರೆ. ಗಣೇಶನು ಅತ್ಯಂತ ಜನಪ್ರಿಯನಾದ ದೇವತೆ. “ಗಣಪನಿಲ್ಲದ ಗ್ರಾಮವಿಲ್ಲ” ಎಂಬ ಗಾದೆ ಪ್ರಸಿದ್ಧವಾಗಿದೆ. Our other books here can be searched using #BharathaSamskruthiPrakashana