ವ್ಯಾಕರಣ ಶಾಸ್ತ್ರದ ಪರಿವಾರ / Vyakarana Shastrada Parivara
VidwanN.RanganathaSharma
あらすじ
“ಕನ್ನಡದಲ್ಲಿ ಪಂಚಮೀವಿಭಕ್ತಿ ಇಲ್ಲ. ತೃತೀಯಾವಿಭಕ್ತಿಯಾದ 'ಇಂದ' ಎಂಬುದೇ ಪಂಚಮಿಯ ಕಾರ್ಯವನ್ನು ನಿರ್ವಹಿಸುತ್ತದೆ” ಎಂದು ಕೆಲವು ಕನ್ನಡ ಸಾಹಿತಿಗಳು ಬರೆದದ್ದುಂಟು. ವಿಖ್ಯಾತವಿದ್ವಾಂಸರಾದ ಶ್ರೀ ಸೇಡಿಯಾಪು ಕೃಷ್ಣ ಭಟ್ಟರು “ಕನ್ನಡದಲ್ಲಿ ಪಂಚಮೀವಿಭಕ್ತಿ ಇದೆ. ತೃತೀಯಾವಿಭಕ್ತಿ ಇಲ್ಲ. ಅದರ ಕಾರ್ಯವನ್ನು ಪಂಚಮೀವಿಭಕ್ತಿಯೇ ನಿರ್ವಹಿಸುತ್ತದೆ” ಎಂದು ತಮ್ಮ ಪಂಚಮೀವಿಭಕ್ತಿಯೆಂಬ ಪ್ರಬಂಧದಲ್ಲಿ ವಾದಿಸಿದ್ದಾರೆ. ಇದೊಂದು ಪ್ರೌಢವಾದ ಪ್ರಬಂಧ. “ಕನ್ನಡದಲ್ಲಿ ತೃತೀಯಾವಿಭಕ್ತಿಯೂ ಇದೆ, ಪಂಚಮೀವಿಭಕ್ತಿಯೂ ಇದೆ. ಎರಡು ಪ್ರತ್ಯಯಗಳೂ 'ಇಂದ' ಎಂಬ ಒಂದೇ ಆಕೃತಿಯಲ್ಲಿವೆ. ಒಂದೇ ಆಕೃತಿಯಲ್ಲಿ ಬೇರೆಬೇರೆ ಜಾತಿಯ ಪ್ರತ್ಯಯಗಳಿರಬಹುದು” ಎಂದು ನನ್ನ ವಾದವಾಗಿದೆ. ಒಂದೇ ಆಕೃತಿಯ ಎರಡು ಸೌಟುಗಳಿರುತ್ತವೆ: ಒಂದು ಸೌಟು ಸಾರನ್ನು ಬಡಿಸುವುದಕ್ಕೆ ಇನ್ನೊಂದು ಪಾಯಸವನ್ನು ಬಡಿಸುವುದಕ್ಕೆ ಸಾರು ಬಡಿಸುವುದನ್ನು ಪಾಯಸದಲ್ಲಾಗಲಿ ಪಾಯಸ ಬಡಿಸುವುದನ್ನು ಸಾರಿನಲ್ಲಾಗಲಿ ಅದ್ದಬಾರದು. ಈ ವಿಚಾರವಾಗಿ ನಾನೊಂದು ಲೇಖನವನ್ನು ಬರೆದು ಡಾ। ಪಾದೇಕಲ್ಲು ವಿಷ್ಣುಭಟ್ಟರಿಗೆ ತೋರಿಸಿದೆ. ಅವರು ಗಂಭೀರವದನರಾಗಿ ಕಾರಕಗಳ ವಿಷಯದಲ್ಲೊಂದು ಪ್ರಬಂಧವನ್ನು ಬರೆದು ಕೊಡಬೇಕೆಂದೂ ಇವೆರಡನ್ನೂ ಮುದ್ರಿಸಿ ಪ್ರಕಟಿಸಲು ಪ್ರಯತ್ನಿಸುವುದಾಗಿಯೂ ನನ್ನನ್ನು ಒತ್ತಾಯಿಸಿದರು. ಅವರ ಸೌಹಾರ್ದದ ಆಗ್ರಹಕ್ಕೆ ಮಣಿದು 'ಕಾರಕ ಮತ್ತು ವಿಭಕ್ತಿಗಳು' ಎಂಬ ಪ್ರಬಂಧವನ್ನು ಬರೆದೆನು.#NRanganathasharma