あらすじ
ಸುಮಿತ್ರೆಯ ಮಗ. ಲಕ್ಷ್ಮಣ-ಶತ್ರುಘ್ನರು ಅವಳಿ ಮಕ್ಕಳು. ಲಕ್ಷ್ಮಣ ಆದಿಶೇಷನ ಅವತಾರ. ವಿಶ್ವಾಮಿತ್ರರು ರಾಮ-ಲಕ್ಷ್ಮಣರನ್ನು ಯಜ್ಞರಕ್ಷಣೆಗಾಗಿ ಕರೆದೊಯ್ಯುತ್ತಾರೆ. ಮುಂದೆ ಸೀತಾಸ್ವಯಂವರದ ತರುವಾಯ ಲಕ್ಷ್ಮಣ ಊರ್ಮಿಳೆಯನ್ನು ವಿವಾಹವಾಗುತ್ತಾನೆ. ರಾಮ ಹದಿನಾಲ್ಕು ವರ್ಷಗಳ ವನವಾಸಕ್ಕೆ ಹೊರಟಾಗ ತಾನು ಕೂಡ ಅವನೊಡನೆ ಹೋಗುತ್ತಾನೆ. ಶೂರ್ಪಣಖಿಯ ಕಿವಿ-ಮೂಗುಗಳನ್ನು ಕತ್ತರಿಸುತ್ತಾನೆ. ಮುಂದೆ ಮಾರೀಚನ ಮಾಯೆಯ ಚಿನ್ನದ ಜಿಂಕೆಯನ್ನು ರಾಮ ಅಟ್ಟಿಸಿಕೊಂಡು ಹೋಗಿ ಬಾಣದಿಂದ ಅದನ್ನು ವಧಿಸಿದಾಗ ಅದು ‘ಹಾ ಲಕ್ಷ್ಮಣ! ಹಾ ಸೀತೆ!’ ಎಂದು ಕೂಗುತ್ತಾ ಸಾಯುತ್ತದೆ. ಆಗ ಸೀತೆ ಲಕ್ಷ್ಮಣನನ್ನು ಕಳಿಸುತ್ತಾಳೆ. ಹೋಗುವಾಗ ಲಕ್ಷ್ಮಣ ಆಶ್ರಮದ ಎದುರು ಗೆರೆಗಳನ್ನು ಎಳೆದು ಅದನ್ನು ದಾಟದಂತೆ ಹೇಳಿ ಹೊರಡುತ್ತಾನೆ. ಅದನ್ನೇ ‘ಲಕ್ಷ್ಮಣ ರೇಖೆ’ ಎನ್ನುತ್ತಾರೆ. ಮುಂದೆ ಲಕ್ಷ್ಮಣ ಇಂದ್ರಜಿತುವನ್ನು ಸಂಹರಿಸುತ್ತಾನೆ. ಈ ರೀತಿ ಲಕ್ಷ್ಮಣನ ಭ್ರಾತೃಪ್ರೇಮ ತ್ಯಾಗಜೀವನ ಎಲ್ಲರಿಗೂ ಆದರ್ಶವಾದುದು. Our other books here can be searched using #BharathaSamskruthiPrakashana