あらすじ
ನಕ್ಷತ್ರಮಂಡಲದಲ್ಲಿ ಮಿನುಗುತ್ತಿರುವುದು ಧ್ರುವ ನಕ್ಷತ್ರ. ಈ ಧ್ರುವನು ಉತ್ತಾನಪಾದ - ಸುನೀತಿಯರ ಪುತ್ರ. ತಂದೆಯ ತೊಡೆಯ ಮೇಲೆ ತಾನು ಕುಳಿತುಕೊಳ್ಳುವುದನ್ನು ಚಿಕ್ಕಮ್ಮನು ವಿರೋಧಿಸಿದಾಗ ತಾಯಿಯ ಸಲಹೆಯಂತೆ ಶಾಶ್ವತ ಸ್ಥಾನವನ್ನು ಪಡೆಯಲು ಶ್ರೀಮನ್ನಾರಾಯಣನನ್ನು ಕುರಿತು ತಪಸ್ಸನ್ನಾಚರಿಸಲು ಕಾಡಿಗೆ ಹೋಗುತ್ತಾನೆ ಧ್ರುವ. ನಾರದರಿಂದ ದ್ವಾದಶಾಕ್ಷರೀ ಮಂತ್ರದ ಉಪದೇಶ ಪಡೆದು ಕಠಿಣ ತಪಸ್ಸನ್ನಾಚರಿಸುತ್ತಾನೆ. ಭಗವಂತನು ಧ್ರುವನಿಗೆ ಪ್ರತ್ಯಕ್ಷನಾಗಿ ನಕ್ಷತ್ರ ಮಂಡಲದಲ್ಲಿ ಶಾಶ್ವತ ಸ್ಥಾನವನ್ನು ಅನುಗ್ರಹಿಸುತ್ತಾನೆ. ಆದರೆ ಧ್ರುವನು ತನ್ನ ತಂದೆ ಹಾಗೂ ಸಹೋದರ ಉತ್ತಮನನ್ನು ಸಂಹರಿಸಿದ ಯಕ್ಷರನ್ನು ಸಂಹರಿಸಿ ನಂತರ ಶ್ರೀಹರಿಯನ್ನು ಕುರಿತು ತಪಸ್ಸುಮಾಡಿ ಧ್ರುವ ಪದವಿಯನ್ನು ಪಡೆಯುತ್ತಾನೆ. Our other books here can be searched using #BharathaSamskruthiPrakashana
ISBN: 9789389020601ASIN: 9389020603