あらすじ
ಈ ಸಂಕಲನದ ಹೃದಯವೇ ಇದು. ಸದ್ದುಗದ್ದಲದ ಬೀದಿಯಲ್ಲಿ ಪ್ರೀತಿಯಲ್ಲ: ಅಲ್ಲಿ ಕಿಂಚಿತ್ತೂ ಹುಲ್ಲು ಕೂಡ ಹುಟ್ಟೋದಿಲ್ಲ. ಇದು ಗದ್ದಲ, ಗಿಜಿಗಿಡುವ ಬೀದಿಗೆ, ಕೀಳುಮಟ್ಟದ ಸದ್ದಿನ ಕಿರಿಕಿರಿಗೆ ಮೌನದ ಚಪ್ಪಲಿ ಏಟು! ನಾವು ಸಾಮಾನ್ಯವಾಗಿ ಪ್ರೀತಿಯನ್ನು ಹಂಬಲ, ನೋವು, ಉಲ್ಲಾಸ ಅಥವಾ ಸಂಕೋಲೆ ಎಂದು ಕಲ್ಪಿಸುತ್ತೇವೆ. ಆದರೆ ನಿಜವಾದ ಪ್ರೀತಿ ಇವುಗಳಲ್ಲಿ ಯಾವುದೂ ಅಲ್ಲ. ಅದು ಗದ್ದಲವಲ್ಲ, ಅದು ಶಾಂತಿ: ಅದು ಒತ್ತಡವಲ್ಲ, ಅದು ಬಿಡುಗಡೆ: ಅದು ಸುಳ್ಳು ಮುಖವಾಡವಲ್ಲ, ಅದು ಸತ್ಯದ ಪ್ರತಿಬಿಂಬ. ಸತ್ಯವೇ ಪ್ರೇಮ, ಪ್ರೇಮವೇ ಸತ್ಯ, ಸತ್ಯವೇ ಹೌಂದರ್ಯ, ಈ ಕವನ ಸಂಕಲನವು ಓದುಗರನ್ನು ಶಬ್ದದಿಂದ ಮೌನದತ್ತ ಕರೆದೊಯ್ಯುತ್ತದೆ. ಮೌನದಲ್ಲಿ ರೂಪುಗೊಳ್ಳುವ ಶುದ್ಧ ಪ್ರೀತಿಯ ಅನುಭದವನ್ನು ಸ್ಪರ್ಶಿಸಲು ಆಹ್ವಾನಿಸುತ್ತದೆ. ಇದು ಕೇವಲ ಕವನಗಳ ಸಂಗ್ರಹವಲ್ಲ; ಇದು ಆಂತರ್ಯಾತ್ರೆಯ ದಾರಿದೀಪ. ಮೌನವೇ ತತ್ರ ಮೌನವೇ ಪ್ರೀತಿ, ಮೌನವೇ ಸತ್ಯ, ಸತ್ಯವೇ ಸೌಂದರ್ಯ. ಇದು ಆತ್ಯದ ಯಾತ್ರೆ, ಪ್ರೀತಿಯ ತತ್ವಶಾಸ್ತ್ರ, ಮೌನದ ಅನಂತಪಾಠ
ISBN: 9789370201569ASIN: 9370201564