あらすじ
ವಾಲಿ-ಸುಗ್ರೀವರು ಅನುಕ್ರಮವಾಗಿ ಇಂದ್ರ ಮತ್ತು ಸೂರ್ಯದೇವರ ವರದಿಂದ ಹುಟ್ಟಿದವರು. ಕಿಷ್ಕಿಂಧೆಯ ರಾಜ ವಾಲಿ. ಅಸಾಧಾರಣ ಶಕ್ತಿಯುಳ್ಳವನು. ಮಾಯಾವಿ ಎಂಬ ರಾಕ್ಷಸನೊಡನೆ ಯುದ್ಧಮಾಡುತ್ತ ಗುಹೆಯನ್ನು ಪ್ರವೇಶಿಸಿ ವರ್ಷವಾದರೂ ಹೊರಕ್ಕೆ ಬಾರದೆ ಹೊರಗೆ ರಕ್ತ ಬರುತ್ತಿರುವುದನ್ನು ನೋಡಿ ಗುಹೆಯ ಹೊರಗೆ ಕಾವಲಿದ್ದ ಸುಗ್ರೀವ ವಾಲಿ ಸತ್ತನೆಂದು ತಿಳಿದು ಕಿಷ್ಕಿಂಧೆಗೆ ಹಿಂದಿರುಗುತ್ತಾನೆ. ಮಾಯಾವಿಯನ್ನು ಸಂಹರಿಸಿ ಗುಹೆಯಿಂದ ಹೊರಬಂದ ವಾಲಿ ಸುಗ್ರೀವನನ್ನು ಕಾಣದೆ ಕಿಷ್ಕಿಂಧೆಗೆ ಬರುತ್ತಾನೆ. ಅಲ್ಲಿ ರಾಜನಾಗಿದ್ದ ಸಹೋದರನನ್ನು ನೋಡಿ ಕೋಪದಿಂದ ಅವನನ್ನು ರಾಜ್ಯಭ್ರಷ್ಟನನ್ನಾಗಿ ಮಾಡಿ ಅವನ ಪತ್ನಿ ರುಮೆಯನ್ನು ತನ್ನ ಅಂತಃಪುರಕ್ಕೆ ಸೇರಿಸಿಕೊಳ್ಳುತ್ತಾನೆ. ಮುಂದೆ ರಾಮ-ಸುಗ್ರೀವ ಸಖ್ಯವಾದ ಬಳಿಕ ರಾಮ ವಾಲಿಯನ್ನು ಸಂಹರಿಸುತ್ತಾನೆ. Our other books here can be searched using #BharathaSamskruthiPrakashana
ISBN: 9789389020960ASIN: 9389020964




























































