ಯಾವುದಾದರೊಂದು ದೇವತೆಯ ಬಗ್ಗೆ ನಮಗೆ ಅಧ್ಯಾತ್ಮಶಾಸ್ತ್ರೀಯ ಜ್ಞಾನವು ದೊರಕಿದರೆ ಆ ದೇವತೆಯ ಬಗೆಗಿನ ನಮ್ಮ ಶ್ರದ್ಧೆಯು ಹೆಚ್ಚಾಗಲು ಸಹಾಯವಾಗುತ್ತದೆ. ಶ್ರದ್ಧೆಯಿಂದ ಸಹಜವಾಗಿಯೇ ಉಪಾಸನೆಯು ಭಾವಪೂರ್ಣವಾಗಿ ಆಗಲು ಸಹಾಯ ವಾಗುತ್ತದೆ ಮತ್ತು ಭಾವಪೂರ್ಣ ಉಪಾಸನೆಯೇ ಹೆಚ್ಚು ಫಲದಾಯಕವಾಗಿರುತ್ತದೆ. ಈ ದೃಷ್ಟಿಯಿಂದ ಈ ಗ್ರಂಥದಲ್ಲಿ ಶ್ರೀ ಗಣಪತಿಗೆ ಸಂಬಂಧಿಸಿದ ಸಾಮಾನ್ಯವಾಗಿ ಎಲ್ಲಿಯೂ ದೊರಕದ; ಆದರೆ ಉಪಯುಕ್ತವಿರುವಂತಹ ಅಧ್ಯಾತ್ಮಶಾಸ್ತ್ರೀಯ ಜ್ಞಾನವನ್ನು ನೀಡುವಲ್ಲಿ ಒತ್ತು ಕೊಡಲಾಗಿದೆ